Monday, March 11, 2013
ಲಾವಣ್ಯದ 36ನೇ ವಾರ್ಷಿಕೋತ್ಸವ
ಲಾವಣ್ಯದ ನೂತನ ಕಾರ್ಯಕಾರಿ ಸಮಿತಿ
ಅಧ್ಯಕ್ಷರು : ರಾಮ ಟೈಲರ್
ಉಪಾಧ್ಯಕ್ಷರು : ರವೀಂದ್ರ ಶ್ಯಾನುಭಾಗ್, ಕೆ. ನಾರಾಯಣ
ಪ್ರಧಾನ ಕಾರ್ಯದರ್ಶಿ : ಬಿ. ಕೃಷ್ಣಮೂರ್ತಿ ಕಾರಂತ
ಜೊತೆ ಕಾರ್ಯದರ್ಶಿ : ಬಿ ನಾಗರಾಜ ಕಾರಂತ, ವಿಶ್ವನಾಥ ಆಚಾರ್ಯ
ಸಂಘಟನಾ ಕಾರ್ಯದರ್ಶಿ : ಡಿ. ಮೂರ್ತಿ
ಕೋಶಾಧ್ಯಕ್ಷ: ಸುನಿಲ್ ಬೈಂದೂರು
ವ್ಯವಸ್ಥಾಪಕರು: ಯು. ಶ್ರೀನಿವಾಸ ಪ್ರಭು, ಬಿ. ಗಣೇಶ ಕಾರಂತ
ಕಾರ್ಯಕಾರಿ ಸಮಿತಿ ಸದಸ್ಯರು:
ಗಿರೀಶ ಬೈಂದೂರು, ಉದಯ ಆಚಾರ್ಯ, ಗಣಪತಿ. ಎಸ್., ನಾಗೇಂದ್ರ ಬಂಕೇಶ್ವರ, ಸತ್ಯಪ್ರಸನ್ನ, ಯೋಗೀಶ ಬಂಕೇಶ್ವರ,
Friday, December 28, 2012
Monday, September 17, 2012
Tuesday, May 15, 2012
Thursday, May 10, 2012
Sunday, March 4, 2012
Wednesday, August 24, 2011
ಲಾವಣ್ಯದ ಗಣೇಶ ಕಾರಂತರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ



Thursday, April 21, 2011
ವಿಶ್ವಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಲಾವಣ್ಯ(ರಿ.) ಬೈಂದೂರಿನ ರಂಗಗೀತೆ ಕಾರ್ಯಕ್ರಮ
ಹಾರ್ಮೋನಿಯಂನಲ್ಲಿ ಯು. ಶ್ರೀನಿವಾಸ ಪ್ರಭು, ಕೀ ಬೋರ್ಡ್ ನಲ್ಲಿ ಚಂದ್ರ ಬಂಕೇಶ್ವರ, ತಬಲ, ಚಂಡೆ ವಾದನದಲ್ಲಿ ಗೋಪಾಲಕೃಷ್ಣ ಜೋಶಿ, ಮಿಶ್ರವಾದ್ಯದಲ್ಲಿ ಬಿ. ಗಣೇಶ್ ಕಾರಂತ್, ಮಂಜುನಾಥ್ ಶಿರೂರು ಸಹಕರಿಸಿದರು. ಗಣಪತಿ ಎಸ್ ನಿರೂಪಣೆಗೈದರು, ಲಾವಣ್ಯದ ಅಧ್ಯಕ್ಷ ಗಿರೀಶ್ ಬೈಂದೂರು ಉಪಸ್ಥಿತರಿದ್ದರು.

Sunday, October 17, 2010
Wednesday, March 24, 2010
Saturday, July 12, 2008
ಪ್ರಾರ್ಥನೆ
ಬೆಳಗಲಿ ಬಾಳಲಿ /
ಲಾವಣ್ಯಬೆಳಗಲಿ ಬಾಳಲಿ //
ಶುಭಕರಿ ಶಾರದೆ ಹರಸು ನೀ ಸತತ //ಬೆಳಗಲಿ//
ನೃತ್ಯ ಲಲಿತಕಲೆ ನಾಟಕಗಾನ
ನವನವರೂಪಕದಿಂ ಮನರಂಜನ /
ಸೇವೆಯ ಧ್ಯೇಯವನಾಂತು ಸಂಭ್ರಮದಿ
ಸ್ನೇಹದ ಸೌರಭ ಸೂಸುತ ಮುದದಿ //ಬೆಳಗಲಿ//
ಯಶ ನೀಡು ಎಮಗೆ ಶ್ರೀಶಾ
ಶುಭವನ್ನು ನೀಡು ವಿಘ್ನೇಶಾ
ನಟವರ ಶಂಕರ ಪೊರೆ ಸೇನೇಶ್ವರ //ಬೆಳಗಲಿ//
ಲಾವಣ್ಯದ ಹುಟ್ಟು ಮತ್ತು ಬೆಳವಣಿಗೆ
ಬೈಂದೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ "ಲಾವಣ್ಯ" ೧೯೭೭ರಲ್ಲಿ ಹುಟ್ಟಿದ್ದು ಒಂದು ಆಕಸ್ಮಿಕ ಘಟನೆ. ಈ ಪರಿಸರದ ಹವ್ಯಾಸಿ ಕಲಾವಿದರಾದ ಯು. ಶ್ರೀನಿವಾಸ ಪ್ರಭು, ಬಿ. ಗಣೇಶ್ ಕಾರಂತ್, ಬಿ. ಕೃಷ್ಣ ಅಡಿಗ, ರಾಮ ಟೈಲರ್, ಅನಿಲ್ ಕುಮಾರ್, ಆರ್.ಡಿ. ಟೈಲರ್, ವಿ. ಆರ್ ಬಾಲಚಂದ್ರ, ಉಮೇಶ್ ಕುಮಾರ್, ದಿ ಮೋಹನ್ ನಾಯಕ್, ದಿರತ್ನಾಕರ್ ಆಚಾರ್ ಇವರೆಲ್ಲಾರ ಆಶಾ ಕೇಂದ್ರವಾಗಿ ಕುಡಿಯೊಡೆದ ಬೈಂದೂರು ತರುಣ ಕಲಾವೃಂದ, ಲಾವಣ್ಯ ಕಲಾವೃಂದವಾಗಿ, ಲಾವಣ್ಯ-ಬೈಂದೂರು, ಹವ್ಯಾಸಿ ಕಲಾ ಸಂಸ್ಥೆಯಾಗಿ ಬೆಳೆದು ಬಂದ ದಿನಗಳ ನೆನಪು ರೋಮಾಂಚಕ.
೧೯೮೦ರಲ್ಲಿ ’ರೊಟ್ಟಿ ಖುಣ’ ನಾಟಕವನ್ನು ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿಸಿ ಪ್ರಥಮ ಪಾರಿತೋಷಕ ಹಾಗೂ ಇತರ ಮೊರು ಪಾರೀತೋಷಕ ಪಡೆಯಿತು. ಬೈಂದೂರಿನ ಇತಿಹಾಸದಲ್ಲೆ ಪ್ರಥಮ ಬಾರಿಗೆ ಪ್ರಥಮ ಹಾಗೂ ಇತರ ಮೊರು ಪಾರಿತೋಷಕಗಳನ್ನು ಪಡೆದು ಬೈಂದೂರಿನ ಜನತೆ ಭೇಷ್ ಎನ್ನುವಂತಾಯಿತು. ಅಂದಿನಿಂದ ಹೊಸ ಹೊಸ ಸದಸ್ಯರು ಸೇರುತ್ತಾ ಬಂದರು. ಅಂತು ೧೯೭೭ ರಿಂದ ’ತರುಣ ಕಲಾವಿದರು’, ’ತರುಣ ಕಲಾವೃಂದ’, ’ಲಾವಣ್ಯ ಕಲಾವೃಂದ ಎಂಬ ಹೆಸರಿನಿಂದ ಕರೆಯಿಸಿಕೊಂಡು ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ನೋಂದಾಯಿಸಲ್ಪಟ್ಟ ಈ ಸಂಸ್ಥೆ "ಲಾವಣ್ಯ(ರಿ) ಬೈಂದೂರು" ಎಂಬ ನೂತನ ನಾಮಕರಣದೊಂದಿಗೆ ಯಶಸ್ವಿ ೩೦ವರ್ಷಗಳನ್ನು ಪೂರೈಸುತ್ತಾ ಬಂತು.
ಪ್ರಾರಂಭದ ಕೆಲವು ವರ್ಷಗಳಲ್ಲಿ ಕೇವಲ ಕಲಾವಿದರು ಮಾತ್ರ ತಂಡದ ಸದಸ್ಯರಾಗಿದ್ದು ಯಾವುದೇ ಸದಸ್ಯತ್ವ ಶುಲ್ಕವಿರಲಿಲ್ಲ. ಆರ್ಥಿಕ ಮುಗ್ಗಟ್ಟು ಸದಾ ಕಾಡುತ್ತಿತ್ತು. ನಂತರ ಶ್ರೀ ಪಿ. ಶೇಷಪ್ಪಯ್ಯ ಇವರ ಮಾರ್ಗದರ್ಶನದಲ್ಲಿ ತಂಡವನ್ನು ನಿರ್ದಿಷ್ಟ ನಿಯಮಾವಳಿಗೊಳಪಟ್ಟ ಸಂಸ್ಥೆಯನ್ನಾಗಿ ರೂಪಿಸಿ, ಸದಸ್ಯಸ್ವ ಶುಲ್ಕವನ್ನು ನಿರ್ಧರಿಸಲಾಯಿತು. ಹೊಸಹೊಸ ಸದಸ್ಯರು ಸಂಸ್ಥೆಗೆ ಸೇರಲಾರಂಭಿಸಿದರು. ಸದಸ್ಯರ ಪ್ರಯತ್ನಗಳಿಗೆ ಊರ ಪರಊರ ಕಲಾಭಿಮಾನಿಗಳು ಸ್ಪಂದಿಸಿ ಪ್ರೋತ್ಸಾಹಿಸುತ್ತಾ ಬಂದರು.
ಶ್ರೀ ಪ್ರಭು, ಗಣೇಶ ಕಾರಂತ ಜೋಡಿ ಲಾವಣ್ಯದ ನೇತೃತ್ವವನ್ನು ವಹಿಸಿಕೊಂಡು ಬಂದಿರುತ್ತಾರೆ.ಎರಡು ವರ್ಷಕ್ಕೊಮ್ಮೆ ಕಾರ್ಯಕಾರಿ ಸಮಿತಿಯನ್ನು ಪುನಾ ರಚಿಸುತ್ತಾ ಹೊಸಬರಿಗೆ ಜವಬ್ದಾರಿಯನ್ನು ಹೊರುವ ಅವಕಾಶವನ್ನು ನೀಡುತ್ತಾ ಬಂದಿದ್ದಾರೆ.
ಇಂದಿನ ಹೊಸ ಹೊಸ ಸದಸ್ಯರಿಗೆ, ಯುವ ಪೀಳಿಗೆಗೆ ಹಾಗೂ ಕಲಾಭಿಮಾನಿಗಳಿಗೆ ಲಾವಣ್ಯದ ಹುಟ್ಟಿನ ಬಗ್ಗೆ ವಸ್ತು ಸ್ಥಿತಿ ಗೊತ್ತಿರಲಿ ಎಂಬ ಉದ್ದೇಶದಿಂದ ಇದನ್ನು ಉಲ್ಲೇಖಿಸುತ್ತಿದ್ದೇವೆ.
Friday, July 11, 2008
ಉದ್ದೇಶ
- ನಾಟಕ, ಯಕ್ಷಗಾನ, ಸಂಗೀತ, ಭರತನಾಟ್ಯ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.
- ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುವುದು, ನಾಟಕ ಸ್ಪರ್ಧೆ ಹಾಗೂ ಕಲಾ ಉತ್ಸವಗಳನ್ನು ಆಚರಿಸುವುದು.
- ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡುವುದು, ಪುಟ್ಟ ಕಲಾವಿದರಿಗೆ ಬೆಂಬಲ ನೀಡಿ ಕಲಾರಂಗದಲ್ಲಿ ಅಭಿವೃದ್ದಿಗೆ ತರುವುದು.
- ಕಲಾ ಪ್ರಸಾರ, ಸಾರ್ವಜನಿಕ ಸೇವೆಗಳನ್ನು ಕಾರ್ಯ ಮುಖೇನ ನಿರ್ವಹಿಸುವುದು, ಸಾಂಸೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು.
- ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು.
- ಪ್ರತಿ ವರ್ಷ ವಾರ್ಷಿಕೋತ್ಸವದ ಸಮಯದಲ್ಲಿ ಕಲಾರಂಗದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವುದು ಇವೇ ಮುಖ್ಯವಾದ ಉದ್ದೇಶಗಳನ್ನು ಸಂಸ್ಥೆಯು ಹೊಂದಿರುತ್ತದೆ.
ಸಾಧನೆಗಳು
- ಲಾವಣ್ಯ ನಾಟಕ ವಿಭಾಗದ ಜೊತೆಗೆ ಮಕ್ಕಳ ನಾಟಕ ವಿಭಾಗ, ಭರತ ನಾಟ್ಯ ವಿಭಾಗ, ಸಂಗೀತ ವಿಭಾಗಗಳ ಮಾರ್ಪಾಟು
- ಈ ವರೆಗೆ ಸುಮಾರು ೬೦ ನಾಟಕಗಳ ೩೦೦ ಪ್ರದರ್ಶನಗಳ ನೀಡಿಕೆ.
- ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಇದುವರೆಗೂ ಭಾಗವಹಿಸಿದ ಎಲ್ಲಾ ೨೦ ನಾಟಕ ಸ್ಪರ್ಧೆಗಳಲ್ಲಿ ೯ ಬಾರಿ ಪ್ರಥಮ, ೭ ಬಾರಿ ದ್ವಿತೀಯ ಹಾಗೂ ೪ ಬಾರಿ ತೃತೀಯ ಪಾರಿತೋಷಕವನ್ನು ಅಲ್ಲದೇ ಉತ್ತಮ ನಿರ್ದೇಶನ, ಉತ್ತಮ ನಟನೆ, ಉತ್ತಮ ಸಂಗೀತ, ಉತ್ತಮ ರಂಗ ಸಜ್ಜಿಕೆ ಮತ್ತು ಬೆಳಕು ಹಾಗೂ ಇತರೇ ವಿಭಾಗಗಳಲ್ಲಿ ಒಟ್ಟು ೭೩ ಪಾರಿತೋಷಕಗಳ ಗಳಿಕೆ.
- ಶ್ರೀ ಜಿ. ಸೀತಾರಾಮ ಶೆಟ್ಟಿ ಕೂರಾಡಿ ಇವರ ನಿರ್ದೇಶನದಲ್ಲಿ ಮಕ್ಕಳ ರಂಗ ತರಬೇತಿ ಶಿಬಿರ.
- ಊರಿನಲ್ಲಿ ಮಾತ್ರವಲ್ಲದೇ ಪರ ಊರು, ಇತರೇ ಜಿಲ್ಲೆಗಳಲ್ಲೂ ನಾಟಕ ಪ್ರದರ್ಶನಗಳ ನೀಡಿಕೆ.
- ಪ್ರತಿ ವರ್ಷ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಲವಾರು ಹಿರಿಯ ಕಲಾವಿದರಿಗೆ ಸನ್ಮಾನ.
- ದಶಮಾನೋತ್ಸವ ಸಂದರ್ಭದಲ್ಲಿ ಬೈಂದೂರಿನಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆ.
- ವಿಂಶತಿ ಉತ್ಸವ ಸಂದರ್ಭದಲ್ಲಿ ದ್ವಿತೀಯ ಬಾರಿಗೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆ.
- ೩೦ನೇ ವರ್ಷದ "ರಂಗ ಲಾವಣ್ಯ-೩೦" ಸಂಭ್ರಮದ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ರಾಜ್ಯ ಮಟ್ಟದ ನಾಟಕೋತ್ಸವ.
- ರಂಗಶ್ರೀ ೧೦ ದಿನಗಳ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಆಯೋಜನೆ