Monday, March 11, 2013

ಲಾವಣ್ಯದ 36ನೇ ವಾರ್ಷಿಕೋತ್ಸವ

ಲಾವಣ್ಯದ 36ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ: 24-02-2013ನೇ ಭಾನುವಾರ ಶ್ರೀ ಶಾರದಾ ವೇದಿಕೆಯಲ್ಲಿ ಲಾವಣ್ಯದ ಅಧ್ಯಕ್ಷರಾದ ಬಿ. ರಾಮ ಟೈಲರ್ ಅಧ್ಯಕ್ಷತೆಯಲ್ಲಿ ಜರುಗಿತು. ವಿನೋದ ಗಂಗೊಳ್ಳಿ ಇವರನ್ನು ಸನ್ಮಾನಿಸಲಾಯಿತು. ಜೇಸಿಯ ರಾಷ್ಟ್ರೀಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಸದಾನಂದ ನಾವಡ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು ಪ್ರಧಾನ ಕಾರ್ಯದರ್ಶಿ ಬಿ. ಕೃಷ್ಣಮೂರ್ತಿ ಕಾರಂತ, ಗೌರವಾಧ್ಯಕ್ಷ ಸದಾಶಿವ ಡಿ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಲಾವಣ್ಯದ ಕಲಾವಿದರಿಂದ ರಾಜೇಂದ್ರ ಕಾರಂತರು ರಚಿಸಿ ನಿರ್ದೇಶಿದ 'ಮರಣ ಮೃದಂಗ' ನಾಟಕ ಯಶಸ್ವಿಯಾಗಿ ಪ್ರದರ್ಶನ ಕಂಡಿತು.

No comments: