Wednesday, August 24, 2011

ಲಾವಣ್ಯದ ಗಣೇಶ ಕಾರಂತರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ











ಶ್ರೀ ಗಣೇಶ ಕಾರಂತ ಬೈಂದೂರು, ಸಂಘಟಕ-ನಟ-ನಿರ್ದೇಶಕ ಲಾವಣ್ಯ(ರ.) ಬೈಂದೂರು ಇವರು ಕನ್ನಡ ರಂಗಭೂಮಿಗೆ ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ ದಿನಾಂಕ 20-08-2011ನೇ ಶನಿವಾರ ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ನಡೆದ ಕರ್ನಾಟಕ ನಾಟಕ ಅಕಾಡೆಮಿಯ ಚಿನ್ನದ ಹಬ್ಬದ ಸಂದರ್ಭದಲ್ಲಿ ರಂಗ ಪ್ರಶಸ್ತಿ ನೀಡಿ ಗೌರವಿಸಿರುತ್ತದೆ. ಸಮಾರಂಭದಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ ಬಿ.ವಿ. ರಾಜಾರಾಂ, ಹಿರಿಯ ನುಡಿ ತಜ್ಞರಾದ ಪ್ರೊ ಜಿ. ವೆಂಕಟಸುಬ್ಬಯ್ಯ, ಹಿರಿಯ ಕವಿಗಳು ಚಿಂತಕರಾದ ರಾಷ್ಟ್ರಕವಿ ಡಾ ಜಿ. ಎಸ್. ಶಿವರುದ್ರಪ್ಪ, ಪ್ರಶಸ್ತಿ ವಿಜೇತ ಚಲನಚಿತ್ರ ನಟ ಶ್ರೀ ಎಚ್. ಟಿ. ದತ್ತಾತ್ರೇಯ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಯುಕ್ತರಾದ ಶ್ರೀ ಮನು ಬಳಿಗಾರ್ ಹಾಗೂ ರಂಗ ಶಂಕರದ ಟ್ರಸ್ಟಿ ಶ್ರೀಮತಿ ಅರುಂಧತಿನಾಗ್ ಉಪಸ್ಥಿತರಿದ್ದರು.

Thursday, April 21, 2011

ವಿಶ್ವಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಲಾವಣ್ಯ(ರಿ.) ಬೈಂದೂರಿನ ರಂಗಗೀತೆ ಕಾರ್ಯಕ್ರಮ

ಬೆಳಗಾವಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ 3ನೇ ದಿನವಾದ ಮಾರ್ಚ 13ರಂದು ಸಂಜೆ ಗಂಟೆ 6ರಿಂದ ಏರ್ಪಡಿಸಿದ "ರಂಗಗೀತೆಗಳು" ಕಾರ್ಯಕ್ರಮದಲ್ಲಿ ನಮ್ಮ ತಂಡವು ಯಶಸ್ವಿಯಾಗಿ ಭಾಗವಹಿಸಿ ಶ್ರೋತೃಗಳನ್ನು ರಂಜಿಸಲಾಯಿತು. ಸೂಕ್ತ ವೇಷ ಭೂಷಣ ತೊಟ್ಟ ಮೊರ್ತಿ , ಕೃಷ್ಣಮೊರ್ತಿ ಕಾರಂತ್, ಮನೋಹರ್, ಬಿ. ನಾಗರಾಜ ಕಾರಂತ್, ಯೋಗೀಶ್, ಸತ್ಯಪ್ರಸನ್ನ, ನಾಗೇಂದ್ರ ಬಂಕೇಶ್ವರ, ವಿಶ್ವನಾಥ ಆಚಾರ್ಯ ಇವರ ಭಾವಪೂರ್ಣ ಗೀತೆಗಳು ಜನಮೆಚ್ಚುಗೆ ಗಳಿಸಿದವು.
ಹಾರ್ಮೋನಿಯಂನಲ್ಲಿ ಯು. ಶ್ರೀನಿವಾಸ ಪ್ರಭು, ಕೀ ಬೋರ್ಡ್ ನಲ್ಲಿ ಚಂದ್ರ ಬಂಕೇಶ್ವರ, ತಬಲ, ಚಂಡೆ ವಾದನದಲ್ಲಿ ಗೋಪಾಲಕೃಷ್ಣ ಜೋಶಿ, ಮಿಶ್ರವಾದ್ಯದಲ್ಲಿ ಬಿ. ಗಣೇಶ್ ಕಾರಂತ್, ಮಂಜುನಾಥ್ ಶಿರೂರು ಸಹಕರಿಸಿದರು. ಗಣಪತಿ ಎಸ್ ನಿರೂಪಣೆಗೈದರು, ಲಾವಣ್ಯದ ಅಧ್ಯಕ್ಷ ಗಿರೀಶ್ ಬೈಂದೂರು ಉಪಸ್ಥಿತರಿದ್ದರು.