ವಿಶ್ವಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಲಾವಣ್ಯ(ರಿ.) ಬೈಂದೂರಿನ ರಂಗಗೀತೆ ಕಾರ್ಯಕ್ರಮ
ಬೆಳಗಾವಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ 3ನೇ ದಿನವಾದ ಮಾರ್ಚ 13ರಂದು ಸಂಜೆ ಗಂಟೆ 6ರಿಂದ ಏರ್ಪಡಿಸಿದ "ರಂಗಗೀತೆಗಳು" ಕಾರ್ಯಕ್ರಮದಲ್ಲಿ ನಮ್ಮ ತಂಡವು ಯಶಸ್ವಿಯಾಗಿ ಭಾಗವಹಿಸಿ ಶ್ರೋತೃಗಳನ್ನು ರಂಜಿಸಲಾಯಿತು. ಸೂಕ್ತ ವೇಷ ಭೂಷಣ ತೊಟ್ಟ ಮೊರ್ತಿ , ಕೃಷ್ಣಮೊರ್ತಿ ಕಾರಂತ್, ಮನೋಹರ್, ಬಿ. ನಾಗರಾಜ ಕಾರಂತ್, ಯೋಗೀಶ್, ಸತ್ಯಪ್ರಸನ್ನ, ನಾಗೇಂದ್ರ ಬಂಕೇಶ್ವರ, ವಿಶ್ವನಾಥ ಆಚಾರ್ಯ ಇವರ ಭಾವಪೂರ್ಣ ಗೀತೆಗಳು ಜನಮೆಚ್ಚುಗೆ ಗಳಿಸಿದವು. ಹಾರ್ಮೋನಿಯಂನಲ್ಲಿ ಯು. ಶ್ರೀನಿವಾಸ ಪ್ರಭು, ಕೀ ಬೋರ್ಡ್ ನಲ್ಲಿ ಚಂದ್ರ ಬಂಕೇಶ್ವರ, ತಬಲ, ಚಂಡೆ ವಾದನದಲ್ಲಿ ಗೋಪಾಲಕೃಷ್ಣ ಜೋಶಿ, ಮಿಶ್ರವಾದ್ಯದಲ್ಲಿ ಬಿ. ಗಣೇಶ್ ಕಾರಂತ್, ಮಂಜುನಾಥ್ ಶಿರೂರು ಸಹಕರಿಸಿದರು. ಗಣಪತಿ ಎಸ್ ನಿರೂಪಣೆಗೈದರು, ಲಾವಣ್ಯದ ಅಧ್ಯಕ್ಷ ಗಿರೀಶ್ ಬೈಂದೂರು ಉಪಸ್ಥಿತರಿದ್ದರು.
No comments:
Post a Comment