Friday, July 11, 2008

ಸಾಧನೆಗಳು


  • ಲಾವಣ್ಯ ನಾಟಕ ವಿಭಾಗದ ಜೊತೆಗೆ ಮಕ್ಕಳ ನಾಟಕ ವಿಭಾಗ, ಭರತ ನಾಟ್ಯ ವಿಭಾಗ, ಸಂಗೀತ ವಿಭಾಗಗಳ ಮಾರ್ಪಾಟು
  • ಈ ವರೆಗೆ ಸುಮಾರು ೬೦ ನಾಟಕಗಳ ೩೦೦ ಪ್ರದರ್ಶನಗಳ ನೀಡಿಕೆ.
  • ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಇದುವರೆಗೂ ಭಾಗವಹಿಸಿದ ಎಲ್ಲಾ ೨೦ ನಾಟಕ ಸ್ಪರ್ಧೆಗಳಲ್ಲಿ ೯ ಬಾರಿ ಪ್ರಥಮ, ೭ ಬಾರಿ ದ್ವಿತೀಯ ಹಾಗೂ ೪ ಬಾರಿ ತೃತೀಯ ಪಾರಿತೋಷಕವನ್ನು ಅಲ್ಲದೇ ಉತ್ತಮ ನಿರ್ದೇಶನ, ಉತ್ತಮ ನಟನೆ, ಉತ್ತಮ ಸಂಗೀತ, ಉತ್ತಮ ರಂಗ ಸಜ್ಜಿಕೆ ಮತ್ತು ಬೆಳಕು ಹಾಗೂ ಇತರೇ ವಿಭಾಗಗಳಲ್ಲಿ ಒಟ್ಟು ೭೩ ಪಾರಿತೋಷಕಗಳ ಗಳಿಕೆ.
  • ಶ್ರೀ ಜಿ. ಸೀತಾರಾಮ ಶೆಟ್ಟಿ ಕೂರಾಡಿ ಇವರ ನಿರ್ದೇಶನದಲ್ಲಿ ಮಕ್ಕಳ ರಂಗ ತರಬೇತಿ ಶಿಬಿರ.
  • ಊರಿನಲ್ಲಿ ಮಾತ್ರವಲ್ಲದೇ ಪರ ಊರು, ಇತರೇ ಜಿಲ್ಲೆಗಳಲ್ಲೂ ನಾಟಕ ಪ್ರದರ್ಶನಗಳ ನೀಡಿಕೆ.
  • ಪ್ರತಿ ವರ್ಷ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಲವಾರು ಹಿರಿಯ ಕಲಾವಿದರಿಗೆ ಸನ್ಮಾನ.
  • ದಶಮಾನೋತ್ಸವ ಸಂದರ್ಭದಲ್ಲಿ ಬೈಂದೂರಿನಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆ.
  • ವಿಂಶತಿ ಉತ್ಸವ ಸಂದರ್ಭದಲ್ಲಿ ದ್ವಿತೀಯ ಬಾರಿಗೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆ.
  • ೩೦ನೇ ವರ್ಷದ "ರಂಗ ಲಾವಣ್ಯ-೩೦" ಸಂಭ್ರಮದ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ರಾಜ್ಯ ಮಟ್ಟದ ನಾಟಕೋತ್ಸವ.
  • ರಂಗಶ್ರೀ ೧೦ ದಿನಗಳ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಆಯೋಜನೆ

No comments: